ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಕಾರ್ಯಕ್ರಮ ಆಚರಣೆ

ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆ ಪವಾಡ ಶ್ರೀ ಬಸವಣ್ಣದೇವರ ಮಠ ನೆಲಮಂಗಲ ಇವರ ವತಿಯಿಂದ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಕಾರ್ಯಕ್ರಮ ಆಚರಣೆ ಮಾಡಲಾಯಿತು.

ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆ ಪವಾಡ ಶ್ರೀ ಬಸವಣ್ಣದೇವರ ಮಠ ನೆಲಮಂಗಲ ಇವರ ವತಿಯಿಂದ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಕಾರ್ಯಕ್ರಮ ಆಚರಣೆ ಮಾಡಲಾಯಿತು. ಆಂಗ್ಲ ಪ್ರೌಢ ಶಾಲೆ ಮಕ್ಕಳಿಂದ ಮ್ಯಾರಥಾನ್ ಅನ್ನು ಶಾಲಾ ಆವರಣದಿಂದ ತಾಲೋಕು ಕಛೇರಿವರೆಗೆ ನಡೆಯಿತು.ದಿವ್ಯ ಸಾನಿಧ್ಯವನ್ನು ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಅಧ್ಯಕ್ಷರು ಪವಾಡ ಶ್ರೀ ಬಸವಣ್ಣದೇವರ ಮಠ ನೆಲಮಂಗಲ ಇವರು ವಹಿಸಿದ್ದರು,
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಕೆ ಸಿ ಗೌತಮ್ ಡಿವೈಎಸ್ಪಿ ನೆಲಮಂಗಲ ಹಾಗೂ ಶ್ರೀ ಶಶಿಧರ್ ಆರಕ್ಷಕ ನಿರೀಕ್ಷಕರು ನಗರ ಪೊಲೀಸ್ ಠಾಣೆ ನೆಲಮಂಗಲ ಮತ್ತು ಶ್ರೀಮತಿ ಡಾಕ್ಟರ್ ಹೇಮಲತಾ ರವರು ತಾಲೂಕು ಆರೋಗ್ಯಾಧಿಕಾರಿಗಳು ಸಾರ್ವಜನಿಕ ಆಸ್ಪತ್ರೆ ನೆಲಮಂಗಲ, ಶ್ರೀಮತಿ ರಾಜೇಶ್ವರಿಯವರು ತಾಲೂಕು ಸಾರ್ವಜನಿಕ ಆಸ್ಪತ್ರೆ ನೆಲಮಂಗಲ ಇವರೆಲ್ಲರೂ ಕಾರ್ಯಕ್ರಮಕ್ಕೆ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Comment

Your email address will not be published.

Bottom Image
error: Content is protected !!