ಡಾ:ಶ್ರೀ ಶ್ರೀ ಶ್ರೀ ಶಿವಕುಮಾರಮಹಾಶಿವಯೋಗಿಗಳ 114 ನೇ ವರ್ಷದ ಜನ್ಮದಿನೋತ್ಸವ
February 24, 2022
ನಡೆದಾಡುವ ದೇವರು ತ್ರಿವಿಧ ದಾಸೋಹಿ, ಸಿದ್ಧಗಂಗೆಯ ಫೂಜ್ಯರು ಡಾ:ಶ್ರೀ ಶ್ರೀ ಶ್ರೀ ಶಿವಕುಮಾರಮಹಾಶಿವಯೋಗಿಗಳ 114 ನೇ ವರ್ಷದ ಜನ್ಮದಿನೋತ್ಸವವನ್ನು ಪವಾಡಶ್ರೀ ಬಸವಣ್ಣ ದೇವರ ಮಠ ದಲ್ಲಿ ಶ್ರೀಶ್ರೀ ಸಿದ್ದಲಿಂಗ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ, ಶ್ರೀ ಬಸವೇಶ್ವರ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಶ್ರೀ ಮಠದ ಸದ್ಭಕ್ತರ ವತಿಯಿಂದ ಸರಳವಾಗಿ ಆಚರಣೆಯನ್ನು ಮಾಡಲಾಯಿತು. ಮತ್ತು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಅನಾರೋಗ್ಯದಿಂದ ಕೂಡಿರುವ ರೋಗಿಗಳಿಗೆ ಹಣ್ಣು, ಬ್ರೆಡ್, ಕುಡಿಯುವ ನೀರನ್ನು ವಿತರಿಸಲಾಯಿತು .